ಪ್ರೇರಣಾಂಗಣ: ಲೋಕಸಭೆಯಲ್ಲಿ ತೊಡೆತಟ್ಟಿದ ದೇವೇಗೌಡ
ಲೋಕಸಭೆ ಕಲಾಪದಲ್ಲಿ ಜೆಡಿಎಸ್ ಸಂಸದ ದೇವೇಗೌಡ ಅವರು ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಲು ಹವಣಿಸಿದರು. ಇದರಿಂದ ಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಯಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅವ್ಯವಹಾರಗಳ ವಿರುದ್ಧ ವಾಗ್ದಾಳಿ ನಡೆಸತೊಡಗಿದರು. ಬಿಜೆಪಿ ಸಂಸದರು ದೇವೇಗೌಡರ ಆರೋಪಗಳ ಬಗ್ಗೆ ಕಿಡಿಕಾರಿದರು. ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸಂಸದರು ಸದನದ ಬಾವಿಗಿಳಿದು ಗೌಡರ ವಿರುದ್ಧ ಘೋಷಣೆ ಕೂಗತೊಡಗಿದರು. ಆಗ ಸ್ಪೀಕರ್ ಮೀರಾಕುಮಾರ್ ಸ್ವಲ್ಪ ಹೊತ್ತು ಕಲಾಪವನ್ನು ಮುಂದೂಡಿದರು. ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಗೌಡರು ತಮ್ಮ ದಾಳಿಯನ್ನು ಮುಂದುವರಿಸಿ, ಸಿಬಿಐ ತನಿಖೆಗೆ ಒಪ್ಪಿಸಲೇಬೇಕು ಎಂಬ ವಾದವನ್ನು ಮುಂದುವರಿಸಿದರು.
ಇತ್ತ, ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್-ನಲ್ಲೂ ಪ್ರಕರಣ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಹಗರಣದ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಭ್ರಷ್ಟಾಚಾರಕ್ಕೆ ಹೊಸ ಮಾರ್ಗವನ್ನೇ ಸೃಷ್ಟಿಸಿಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದೇ ನಮ್ಮ ಉದ್ದೇಶ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವವದಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸತೊಡಗಿದರು. ಯಡಿಯೂರಪ್ಪ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿಯೂ ನಡೆಯಿತು.
ಒಂದು ಹಂತದಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡಲೇಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಯಾವುದೇ ಕಾರಣಕ್ಕೂರಾಜೀನಾಮೆ ನೀಡುವುದಿಲ್ಲ. ಪ್ರಕರಣವನ್ನು ಯಾವುದೇ ತನಿಖೆಗೂ ಒಪ್ಪಿಸುವುದಿಲ್ಲ. ಮೊದಲು ಆರೋಪವನ್ನು ಸಾಬೀತುಪಡಿಸಿ ಎಂದು ಸವಾಲ್ ಹಾಕಿದರು.

English summary
The former Prime Minister HD Devegowda has raised the Prerana Trust scandal during Zero Hour in Lok Sabha on Wednesday (March 16). He damanded for CBI Enquiry. The main allegatiobn is that the Prerana Educational and Social Trust is an educational trust formed by Karnataka CM Yeddyurappa's son and Lok Sabha member Raghavendra has received Rs.27.18 crore by way of corpus donation by misusing the Chief Minister's office
No comments:
Post a Comment